67ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮ
ಅಸ್ಸಿಸಿ ಶಾಲೆಯಲ್ಲಿ ಕರುನಾಡಿನ ದೀಪದ ಸಡಗರ
ಚಿಕ್ಕೋಡಿಯ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯಲ್ಲಿ 67ನೇ
ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಕಾರ್ಯಕ್ರಮವನ್ನು
2022 ನವೆಂವರ್ 1 ರಂದು ತುಂಬಾ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ
ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯ
ನೃತ್ಯದೊಂದಿಗೆ ಆರಂಭಿಸಲಾಯಿತು. ನಂತರ ಕನ್ನಡಾಂಬೆ ತಾಯಿ
ಭುವನೇಶ್ವರಿ ದೇವಿ ಹಾಗೂ ಲಕ್ಷ್ಮಿದೇವಿಯ ಭಾವಚಿತ್ರಕ್ಕೆ ಪೂಜೆ
ಸಲ್ಲಿಸಿ, ನಾಡಗೀತೆ ಹಾಡುವುದರ ಮೂಲಕ ನಾಡು-ನುಡಿಗೆ ಗೌರವ
ಸಲ್ಲಿಸಲಾಯಿತು. ಅತಿಥಿ ಸ್ಥಾನವನ್ನು ಅಲಂಕರಿಸಿದ್ದ ಇಲ್ಲಿಯ ‘ಬರೋಡಾ
ಬ್ಯಾಂಕಿನ’ ಸಹಾಯಕ ವ್ಯವಸ್ಥಾಪಕರಾದ ‘ಹಿರಫಾನ ಬಾಷಾ’ ಅವರು
ಮಾತನಾಡಿ ಕರ್ನಾಟಕ ರಾಜ್ಯದ ರಚನೆ ಹಾಗೂ ಅದರ
ಮಹಿಮೆಯನ್ನು ಕುರಿತು ಹೊಗಳಿದರು.
ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಸಂಸ್ಕøತಿ,
ಪರಂಪರೆಯನ್ನು ಬಿಂಬಿಸುವ ಮತ್ತು ಭಾರತದ ಅತೀ ದೊಡ್ಡ
ಹಬ್ಬವಾದ ದೀಪಾವಳಿಯ ಮಹತ್ವವನ್ನು ಸಾರುವ ಹಾಡುಗಳಿಗೆ
ನೃತ್ಯ ಪ್ರದರ್ಶಿಸಿ, ಅಲ್ಲಿ ಸೇರಿದ್ದ ಜನರ ಕಣ್ಮನ ಸೆಳೆದರು. ಹಾಗೂ
ವಿದ್ಯಾರ್ಥಿಗಳ ಸಡಗರದಿಂದ, ದೀಪಾವಳಿಯ ಸಿಡಿಮದ್ದುಗಳ
ವರ್ಣಮಯ ಬೆಳಕಿನ ಸಂಭ್ರಮದಲ್ಲಿ ಅಸ್ಸಿಸಿ ಶಾಲೆಯು
ಕಂಗೊಳಿಸುತ್ತಿತ್ತು.
ರಾಜ್ಯೋತ್ಸವದ ಅಂಗವಾಗಿ ‘ಕರ್ನಾಟಕ ರಾಜ್ಯೋತ್ಸವ
ದಿನಾಚರಣೆ ಸಮಿತಿ, ಚಿಕ್ಕೋಡಿ’. ಇವರು ಏರ್ಪಡಿಸಿದ್ದ ಭವ್ಯ
ಮೆರವಣಿಗೆಯಲ್ಲಿ “ಚಿತ್ರದುರ್ಗದ ಕಲ್ಲಿನ ಕೋಟೆಯನ್ನು
ಒಳಗೊಂಡ ವೀರವಣಿತೆ ಒನಕೆ ಓಬವ್ವಳ ಸಾಹಸವನ್ನು
ಬಿಂಬಿಸುವ ರೂಪಕ”ದೊಂದಿಗೆ ಶಾಲೆಯ ವಿದ್ಯಾರ್ಥಿಗಳು
ಅತ್ಯುತ್ಸಾಹದಿಂದ ಭಾಗವಹಿಸಿದ್ದರು.
ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಸಪನಾ ಚೌಗಲಾ ಮತ್ತು
ಕುಮಾರಿ ಶ್ರೀರಕ್ಷಾ ಡಂಬಳ ಇಬ್ಬರೂ ಸೇರಿ ಕಾರ್ಯಕ್ರಮದ
ನಿರೂಪಣೆಯನ್ನು ನೆರವೇರಿಸಿಕೊಟ್ಟರು. ನಿಪ್ಪಾಣಿಯ ಫಾದರ್
ಪ್ರದೀಪ್, ಇಲ್ಲಿಯ ವಿಮುಕ್ತಿ ಸಾಮಾಜಿಕ ಸಂಸ್ಥೆಯ ನಿರ್ದೇಶಕರಾದ
ಫಾದರ್ ವಿನ್ಸಂಟ್, ಶಾಲೆಯ ಪ್ರಾಂಶುಪಾಲರಾದ ಫಾದರ್ ಜೇಸನ್
ಫರ್ನಾಂಡಿಸ್, ಮತ್ತು ಎಲ್ಲ ಶಿಕ್ಷಕ-ಸಿಬ್ಬಂದಿ ವರ್ಗದವರು,
ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.