“ಕೋಟಿ ಕಂಠ ಗಾಯನ”
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು 67ನೇ
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದಿನಾಂಕ 28/10/2022 ರಂದು
ಕನ್ನಡ ನಾಡು-ನುಡಿಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನವನ್ನು
ಹೆಚ್ಚಿಸುವ ಸಲುವಾಗಿ “ನನ್ನ ನಾಡು, ನನ್ನ ಹಾಡು” ಎಂಬ
ಅಭಿಯಾನವನ್ನು ಆಯೋಜಿಸಿದ್ದರು. ಈ ಅಭಿಯಾನದ “ಕೋಟಿ
ಕಂಠ ಗಾಯನ” ಕಾರ್ಯಕ್ರಮದಲ್ಲಿ ನಮ್ಮ ಸೇಂಟ್ ಫ್ರಾನ್ಸಿಸ್
ಆಫ್ ಅಸ್ಸಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ನಿಗದಿಪಡಿಸಿದ
ಹಾಡುಗಳನ್ನು ಸುಶ್ರಾವ್ಯವಾಗಿ ಗಾಯನ ಮಾಡುವುದರ
ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವು
ಯಶಸ್ವಿಗೊಳ್ಳಲು ಸಹಕರಿಸಿದರು. ಇದರ ಫಲವಾಗಿ ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯವರು “ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ
ಶಾಲೆಯ ಹೆಸರಿನಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಿರುತ್ತಾರೆ.